Memorable Persons

ಶ್ರೀ ಹಲ್ಸನಾಡು ವಿಶ್ವೇಶ್ವರಯ್ಯ
ಪಠೇಲರು,ಶಾಲಾ ಸಂಸ್ಥಾಪಕರು

ಶ್ರೀ ಹಲ್ಸನಾಡು ವಿಶ್ವೇಶ್ವರಯ್ಯ ಈ ನಾಡು ಕಂಡ ಅಪರೂಪದ ವ್ಯಕ್ತಿಗಳಲ್ಲಿ ಒರ್ವರು. 1966 ರಲ್ಲಿ ಹಕ್ಲಾಡಿಯಲ್ಲಿ ಮೀನುಗಾರಿಕಾ ಪ್ರೌಢಶಾಲೆ ಸ್ಥಾಪನೆ ಮಾಡಿದ ಮಹನೀಯರು. ದಿ.ವಿಶ್ವೇಶ್ವರಯ್ಯನವರ ಅವಿರತ ಹೋರಾಟ ಮತ್ತು ತ್ಯಾಗದ ಫಲವಾಗಿ ಈ ಪ್ರೌಢಶಾಲೆ ನಿರ್ಮಾಣಗೊಂಡಿತು. ಸುಮಾರು 25 ವರ್ಷ ಹಲ್ಸನಾಡು ವಿಶ್ವೇಶ್ವರಯ್ಯನವರ ಖಾಸಗಿ ಕಟ್ಟಡದಲ್ಲಿ ಶಾಲೆ ತನ್ನ ಚಟುವಟಿಕೆಗಳನ್ನು ನಡೆಸಿತ್ತು. 1990ರ ದಶಕದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. 1960 ರ ದಶಕದಲ್ಲಿ ಗ್ರಾಮೀಣ ಭಾಗವಾದ ಹಕ್ಲಾಡಿಯಲ್ಲಿ ಪ್ರೌಢಶಾಲೆ ನಿರ್ಮಿಸಿ ಗ್ರಾಮೀಣ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾದ ಶ್ರೀ ಹಲ್ಸನಾಡು ವಿಶ್ವೇಶ್ವರಯ್ಯ ಇಂದಿಗೂ ಪ್ರಾತಃಸ್ಮರಣೀಯರು.

ಕೊಳ್ಕೆಬೈಲು ಸೂರಪ್ಪ ಶೆಟ್ಟಿ ವಕೀಲರು ಬಾರಂದಾಡಿ

ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪ್ರೌಢಶಾಲೆಗೆ ಹೊಸರೂಪ ಕೊಟ್ಟ ಮಹನೀಯರು.ಸೂರಪ್ಪ ಶೆಟ್ಟರು ಶೈಕ್ಷಣಿಕ ದೂರದರ್ಶಿತ್ವದ ಹೊಂದಿದ ನಾಯಕರಾಗಿದ್ದು, ಅದರ ಫಲವಾಗಿ 1992 ಮೀನುಗಾರಿಕಾ ಪ್ರೌಢಶಾಲೆಗೆ ಸ್ವಂತ ಕಟ್ಟಡ ಕಟ್ಟುವಾಗ  1 ಲಕ್ಷ ರೂಪಾಯಿ ನೀಡಿದರು.ಈ ಕಾರಣದಿಂದ ಮೀನುಗಾರಿಕಾ ಪ್ರೌಢಶಾಲೆ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪ್ರೌಢಶಾಲೆಯಾಗಿ ಮರುನಾಮಕರಣಗೊಂಡಿತು. 2019 ರಲ್ಲಿ ದಿ. ಬಾರಂದಾಡಿ ಜಗತ್ ಹೆಗ್ಡೆ ಸ್ಮಾರಕ ಗ್ರಂಥಾಲಯ ಅವರ ಕುಟುಂಬದವರ ಸಹಕಾರದಿಂದ ನಿರ್ಮಾಣಗೊಂಡಿದೆ. ಗ್ರಂಥಾಲಯ ನಿರ್ಮಾಣದಲ್ಲಿ ಶ್ರೀ ಸೂರಪ್ಪ ಶೆಟ್ಟರ ನಿಕಟವರ್ತಿಗಳಾದ ಗಣಪಯ್ಯ ಶೆಟ್ಟರ ಪಾತ್ರ ಪ್ರಧಾನವಾಗಿದೆ.

ಶ್ರೀ ಭಾಸ್ಕರ ಶೆಟ್ಟಿ ಬಾಳೆಮನೆ

ದಿ.ಬಾಳೆಮನೆ ಭಾಸ್ಕರ ಶೆಟ್ಟಿ ಹಕ್ಲಾಡಿ ಗ್ರಾಮ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು.ಬಾಳೆಮನೆ ಭಾಸ್ಕರ ಶೆಟ್ಟಿಯವರು ರಾಜಕೀಯ ನೇತಾರರಾಗಿ, ಸಾಂಸ್ಕೃತಿಕ ನಾಯಕರಾಗಿ,ಶೈಕ್ಷಣಿಕ ಕಾಳಜಿವುಳ್ಳವರಾಗಿದ್ದು. ಹಕ್ಲಾಡಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ದುಡಿದವರು. ಹಕ್ಲಾಡಿ ಪ್ರೌಢಶಾಲೆಯ ನಿರ್ಮಾಣದಲ್ಲಿ ಪ್ರಧಾನ ಪಾತ್ರವಹಿಸಿದವರು. ಅವರ ನೆನಪಿಗೊಸ್ಕರ ಅವರ ಸಹೋದರ  ಬಾಳೆಮನೆ ಶ್ರೀ ಸಂತೋಷ ಶೆಟ್ಟಿಯವರು  ದಿ ಬಾಳೆಮನೆ ಭಾಸ್ಜರ ಶೆಟ್ಟಿ ಸ್ಮಾರಕ ರಂಗಮಂದಿರ ನಿರ್ಮಿಸಿ ಪ್ರೌಢ ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ. ಈ ರಂಗಮಂದಿರ 2021 ರಲ್ಲಿ ಸುಸಜ್ಜಿತವಾಗಿ ಮರುನಿರ್ಮಾಣಗೊಳ್ಳುತ್ತಿದೆ.

ಶ್ರೀ ಕಾವ್ರಾಡಿ ಶಿವರಾಮ ಶೆಟ್ಟಿ,ಕುಂದಬಾರಂದಾಡಿ

ಶ್ರೀ ಕಾವ್ರಾಡಿ ಶಿವರಾಮ ಶೆಟ್ಟಿ,ಕುಂದಬಾರಂದಾಡಿ ಇವರು ಗ್ರಾಮೀಣ ಭಾಗದ ಹಕ್ಲಾಡಿ ಪ್ರೌಢಶಾಲೆಗೆ ಭೌತಿಕ ಸೌಲಭ್ಯ ನಿರ್ಮಾಣ ಮಾಡುವಲ್ಲಿ ಸಹಕಾರ ನೀಡಿದ ಮಹನೀಯರು.ಶಾಲಾಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದವರು.ಶಾಲೆಗೆ ಹೊಸ ಆಟದ ಮೈದಾನ ನಿರ್ಮಾಣ ಮಾಡಿಕೊಟ್ಟ ದಾನಿಗಳು.ಪ್ರೌಢಶಾಲೆಯ ಧ್ವಜ ಸ್ತಂಭ ಇವರ ಹೆಸರಿನಲ್ಲಿ ಅವರ ಮಗ ಕಾವ್ರಾಡಿ ಅಶೋಕಕುಮಾರ ಶೆಟ್ಟಿ ನಿರ್ಮಾಣ ಮಾಡಿಕೊಟ್ಟಿದ್ದಾರೆ.2021 ರಲ್ಲಿ ಈ ಧ್ವಜದ ಕಟ್ಟೆಯನ್ನು ಶ್ರೀ ಸುಭಾಷ್ ಶೆಟ್ಟಿ ಹೊಳ್ಮಗೆ ಇವರು ಪುನರ್ ನಿರ್ಮಾಣ ಮಾಡಿದ್ದಾರೆ.

ಶ್ರೀ ಬಿ ಅರುಣ ಕುಮಾರ ಶೆಟ್ಟಿ

ಶ್ರೀ ಬಿ ಅರುಣ ಕುಮಾರ ಶೆಟ್ಟಿಯವರು ಕುಂದಾಪುರ ತಾಲೂಕಿನ ಧಾರ್ಮಿಕ ನೇತಾರರು.1990 ರ ದಶಕದಲ್ಲಿ ಈ ಸಂಸ್ಥೆಯ ನಿರ್ಮಾಣದಲ್ಲಿ ಸಹಕಾರ ನೀಡಿದವರು ಇವರ ಶೈಕ್ಷಣಿಕ ಕಾಳಜಿಯಿಂದ 1992 ರಲ್ಲಿ ಪ್ರೌಢಶಾಲೆಗೆ ಹೊಸಕಟ್ಟಡ ನಿರ್ಮಾಣವಾಯಿತು.

ಶ್ರೀ ಸುಕುಮಾರ ಶೆಟ್ಟಿ

ಶ್ರೀ ಬಿ ಎಂ ಸುಕುಮಾರ ಶೆಟ್ಟಿಯವರು 1990 ರ ದಶಕದಲ್ಲಿ ಸರಕಾರಿ ಪ್ರೌಢಶಾಲೆಯ ನಿರ್ಮಾಣದಲ್ಲಿ ಮುಂಚೂಣಿಯಲ್ಲಿ ನಿಂತ ನಾಯಕರು.ಕಟ್ಟಡ ಕಾಮಗಾರಿ ಸ್ಥಗಿತಗೊಂಡ ಸಂದರ್ಭದಲ್ಲಿ ಇಡಿ ಶಾಲೆಗೆ ಬೇಕಾದ ಮಂಗಳೂರು ಹಂಚಿನ ವ್ಯವಸ್ಥೆ ಮಾಡಿ ಪ್ರೌಢಶಾಲೆಯ ಕಟ್ಟಡ ಪೂರ್ಣವಾಗುವಂತೆ ನೋಡಿಕೊಂಡವರು.ಅವರ ಕೊಡುಗೆಯಿಂದ ಇವತ್ತು ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯ ಮೂಲಕ ವಿದ್ಯಾವಂತರಾಗಿದ್ದಾರೆ. ಮಾನ್ಯ ಬಿ ಎಂ ಸುಕುಮಾರ ಶೆಟ್ಟರು ಈ ಸಂಸ್ಥೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಆಗಿದ್ದಾರೆ.

X