ಧ್ಯೇಯವಾಕ್ಯ:-“ಗ್ರಾಮೀಣ ವಿದ್ಯಾರ್ಥಿ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ, ಉತ್ತಮ ಭವಿಷ್ಯ ನಿರ್ಮಾಣ”   2022-23 Results 100% English Medium, Kannada medium 97%   2023-24 ನೆಯ ಸಾಲಿನ ದಾಖಲಾತಿ ಆರಂಭಗೊಂಡಿದೆ

ಶ್ರೀ ಕೆ ಎಸ್ ಎಸ್ ಸರಕಾರಿ ಪ್ರೌಢಶಾಲೆ ಹಕ್ಲಾಡಿ

ಧ್ಯೇಯವಾಕ್ಯ:-“ಗ್ರಾಮೀಣ ವಿದ್ಯಾರ್ಥಿ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ, ಉತ್ತಮ ಭವಿಷ್ಯ ನಿರ್ಮಾಣ”
ಸಾವಿರದ ಒಂಬೈನೂರ ಅರವತ್ತ ಆರನೆಯ ಇಸವಿ ಆಗಸ್ಟ ತಿಂಗಳ 1ನೆಯ ತಾರೀಕು ಹಕ್ಲಾಡಿ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳ ಬದುಕಿನ ಶೈಕ್ಷಣಕ ಸ್ವಾತಂತ್ರ್ಯಕ್ಕೆ ಆಶಾಕಿರಣವೊಂದು ಶರದೃತುವಿನಲ್ಲಿ ಕಾಣ ಸಿಕೊಂಡಿತ್ತು. ಜೋರಾದ ಮಳೆ ನಿಂತು, ಹಸಿರು ತುಂಬಿದ ಕಾಲದಲ್ಲಿ ಶರದೃತು ಉಲ್ಲಾಸವನ್ನು ನೀಡುವಂತೆ, ಹಲಸನಾಡು ಶ್ರೀ ವಿಶ್ವೇಶ್ವರಯ್ಯನವರ ಹೋರಾಟದ ಫಲವಾಗಿ ಜನ್ಮತಳೆದ ಮೀನುಗಾರಿಕಾ ಪ್ರೌಢಶಾಲೆ ಹಕ್ಲಾಡಿ ಸುತ್ತಮುತ್ತಲಿನ ಜನಸಮುದಾಯದಲ್ಲಿ ಅನೇಕ ವರ್ಷಗಳಿಂದ ಜಡ್ಡುಗಟ್ಟಿದ ಅನಕ್ಷರತೆಯ ಎಲೆಗಳನ್ನು ಉದುರಿಸಿ ಸಂಪ್ರೀತರನ್ನಾಗಿ ಮಾಡಿತು. ಪ್ರೌಢಶಾಲೆಯ ಶಿಲ್ಪಿ ಹಲ್ಸನಾಡು ಶ್ರೀ ವಿಶ್ವೇಶ್ವರಯ್ಯ ಇತಿಹಾಸದ ಪುಟದಲ್ಲಿ ಮರೆಯಾದರೂ ಅವರ ಕನಸಿನ ಶಾಲೆ ಇಂದು ಇತಿಹಾಸದ ಪುಟವಾಗಿ ಹೊಮ್ಮುತ್ತಿದೆ. ಶಾಲಾರಂಭವು ಹಲಸನಾಡು ಅರಮನೆಯಲ್ಲಿ ಅತ್ಯಂತ ವೈಭವದಿಂದ ನಡೆಯಿತು. ಶಾಲಾ ಆರಂಭಕ್ಕೆ ಬಂದಿರುವ ಧೀಮಂತರ ಪಟ್ಟಿ ನೋಡಿದರೆ ಹಲಸನಾಡು ಅರಮನೆಯವರ ಖ್ಯಾತಿಗೆ ಬೆಳಕು ಚೆಲ್ಲುವಂತಿತ್ತು. ಆನಂತರದಲ್ಲಿ ವೀನುಗಾರಿಕಾ ಪ್ರೌಢಶಾಲೆ ಹಲಸನಾಡು ಮನೆಯವರ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಆಕಾಲದಲ್ಲಿ ಶ್ರೀ ಹಲ್ಸನಾಡು ವಿಶ್ವೇಶ್ವರಯ್ಯನವರ ಶ್ರಮದ ಹಿಂದೆ ಮೊಗವೀರ ಸಮುದಾಯದ ಅನೇಕರು ದುಡಿದಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಬೇಕಾಗಿದೆ.

ಅನೇಕ ವರ್ಷಗಳ ಪರ್ಯಂತ ಹಲಸನಾಡು ಮನೆಯವರ ಬಾಡಿಗೆ ಕಟ್ಟಡದಲ್ಲಿ ವೀನುಗಾರಿಕಾ ಪ್ರೌಢಶಾಲೆ ಜ್ಞಾನದ ಬೆಳಕನ್ನು ಬಡ ವಿದ್ಯಾರ್ಥಿಗಳಿಗೆ ನೀಡುತ್ತ ಬಂದಿತು. ಹೀಗಿರುವಾಗ ಹಲ್ಸನಾಡು ಮನೆಯವರು ಕಟ್ಟಿಸಿದ ಶಾಲೆ ಶಿಥಿಲವಾವಸ್ಥೆಗೆ ತಲುಪಲಾರಂಭಿಸಿತು. ಮೇಲ್ನಾಡುಗಳು ಶಿಥಿಲಗೊಂಡಿರುವ ಶಾಲಾಕಟ್ಟಡದ ಅಪಾಯ ಅರಿತ ಲೋಕೋಪಯೋಗಿ ಇಲಾಖೆ ಶಾಲಾ ಕಟ್ಟಡವನ್ನು ಬದಲಾಯಿಸುವಂತೆ ಕೋರಿತು. ಮುಂದೆ ಹೊಸಕಟ್ಟಡ ನಿರ್ಮಾಣವಾಗುವವರೆಗೆ ಮಾಣಿಕೊಳಲು ಚನ್ನಕೇಶವ ದೇವಸ್ಥಾನದ ಹೆಬ್ಚಾಗಿನಲ್ಲಿ ತರಗತಿ ಮುಂದುವರಿಯಿತು. ಮಾಣಿಕೊಳಲು ದೇವಸ್ಥಾನದ ಹೆಬ್ಬಾಗಿಲು ಕೂಡಾ ಶಿಥಿಲಗೊಂಡಿರುದರಿಂದ 1992 ರಲ್ಲಿ ಹೊಸ ಶಾಲಾ ಕಟ್ಟಡ ಕಟ್ಟುವ ಸಂಕಲ್ಪಕ್ಕೆ ಅನೇಕ ವಿದ್ಯಾಭಿಮಾನಿಗಳು ಮುಂದಾದರು. ಕೊಳ್ಕೆಬೈಲು ಸೂರಪ್ಪ ಶೆಟ್ಟಿಯವರು ರೂ 1 ಲಕ್ಷವನ್ನು ಶಾಲಾ ಕಟ್ಟಡ ನಿರ್ಮಾಣಕ್ಕೆ ನೀಡುತ್ತೇನೆ ಎಂದು ಮುಂದೆ ಬಂದರು. ಶ್ರೀ ವಿಶ್ವೇಶ್ವರಯ್ಯನವರ ಶ್ರಮದದಿಂದ ರೂಪುಗೊಂಡ ಅಕ್ಷರದೇಗುಲಕ್ಕೆ 1992 ರಲ್ಲಿ ಭವ್ಯ ಆಲಯ ನಿರ್ಮಾಣವಾಯಿತು. ಈ ಹಿಂದಿನ ಮೀನುಗಾರಿಕಾ ಪ್ರೌಢಶಾಲೆ ಶ್ರೀ ಕೊಳ್ಕೆಬೈಲು ಸೂರಪ್ಪಶೆಟ್ಟಿ ಸರಕಾರಿ ಪ್ರೌಢಶಾಲೆಯಾಗಿ ಮರುನಾಮಕರಣಗೊಂಡಿತು. ಗ್ರಾಮೀಣ ಭಾಗದ ಹಕ್ಲಾಡಿ ಪ್ರೌಢಶಾಲೆ ಭೌಗೋಳಿಕವಾಗಿ ಹಕ್ಲು ಮತ್ತು ಹಾಡಿಯನ್ನು ಒಳಗೊಂಡ ಪ್ರದೇಶವಾಗಿದೆ. ಈ ಪ್ರೌಢಶಾಲೆ 2.15 ಎಕ್ರೆ ಭೂಮಿಯನ್ನು ಹೊಂದಿದ್ದು, ಶಾಲೆಯ ಸುತ್ತಲೂ ನಿತ್ಯಹರಿದ್ವರ್ಣದ ದೇಶಿ ಸಸ್ಯಗಳಿಂದ ತುಂಬಿದೆ. ಇಂತಹ ಸುಂದರ ಪ್ರಕೃತಿ ಸೌoದರ್ಯದ ನಡುವೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕನ್ನಡ ಮತ್ತು ಇಂಗ್ಲೀಷ ಮಾದ್ಯಮದಲ್ಲಿ ಬೋಧನಾ-ಕಲಿಕೆ ನಡೆಯುತ್ತಿದ್ದು ಪ್ರತಿವರ್ಷ ಉತ್ತಮ ಫಲಿತಾಂಶ ದಾಖಲಿಸುತ್ತ ಬಂದಿದೆ. ”ಗ್ರಾಮೀಣ ವಿದ್ಯಾರ್ಥಿ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ ,ಉತ್ತಮ ಭವಿಷ್ಯ ನಿರ್ಮಾಣ ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಪ್ರೌಡಶಾಲೆ ತನ್ನ ಧ್ಯೇಯವನ್ನು(ವಿಷನ್) ಸಾಧಿಸಲು ಶ್ರಮಿಸುತ್ತಿದೆ. ಪ್ರಸ್ತುತ 215 ವಿದ್ಯಾರ್ಥಿಗಳು ಮತ್ತು 9 ಜನ ನುರಿತ ಶಿಕ್ಷಕರನ್ನು ಹೊಂದಿರುವ ಈ ಸಂಸ್ಥೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಕಾಶಿಯಾಗಿದೆ.

ಸೃಜನಶೀಲ ಬೋಧಕರು

IT@school Haklady

ಶಿಕ್ಷಕರ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮದಡಿಯಲ್ಲಿ (Technology Assisted Learning Programme) ರೂಪಿತವಾದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕಂಪ್ಯೂಟರ್ ಶಿಕ್ಷಣದ ಸೌಲಭ್ಯ 2020 ರಲ್ಲಿ ಆರಂಭಗೊಂಡಿದೆ.ಶಿಕ್ಷಕರು ಕಲಿಕೆಯನ್ನು ಅನುಕೂಲಿಸುವ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಬೋಧನೆ ಮಾಡುವ ಸೌಲಭ್ಯ ಇಲ್ಲಿದೆ. ಇಲ್ಲಿ ಪ್ರತಿ ವಿಷಯ ಶಿಕ್ಷಕರು ಕಲಿಕೆಯನ್ನು ಅನುಕೂಲಿಸಲು ಪಠ್ಯ ಸಂಬಂಧಿ ಆಡಿಯೋ, ವೀಡಿಯೋಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ತಲುಪಿಸುತ್ತಾರೆ. ಇಲ್ಲಿ ಬೋಧಿಸುವ ಶಿಕ್ಷಕರು ತಂತ್ರಜ್ಞಾನ ಬಳಸುದರಲ್ಲಿ ಪರಿಣತಿಯನ್ನು ಹೊಂದಿರುತ್ತಾರೆ. ಶಿಕ್ಷಕರು ಮಾತ್ರವಲ್ಲದೇ ವಿದ್ಯಾರ್ಥಿಗಳು ಈ ಲ್ಯಾಬ್ ನ ಮೂಲಕ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ಸೃಷ್ಟಿಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಕಲಿಕೆಯನ್ನು ಅನುಕೂಲಿಸುವ 10 ಕಂಪ್ಯೂಟರ್ ಈ ಲ್ಯಾಬ್‍ನಲ್ಲಿದೆ.

ಬಾರಂದಾಡಿ ಜಗತ್ ಹೆಗ್ಡೆ ಸ್ಮಾರಕ ಗ್ರಂಥಾಲಯ

ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆಯ ವಿಶೇಷತೆಯ ಕೊರಳಹಾರವೇ ಶಾಲಾಗ್ರಂಥಾಲಯ. ದಿ ಬಾರಂದಾಡಿ ಜಗತ್ ಹೆಗ್ಡೆ ಸ್ಮಾರಕ ಗ್ರಂಥಾಲಯವು ಸುಮಾರು 6 ಲಕ್ಷ ರೂಪಾಯಿ ಮೌಲ್ಯದ 25000 ಪುಸ್ತಕವನ್ನು ಒಳಗೊಂಡಿದೆ. 2019 ರಲ್ಲಿ ಗ್ರಂಥಾಲವನ್ನು ಡಿಜಿಟಲೀಕರಣ ಮಾಡಲಾಗಿದ್ದು, ಕ್ಷಣ ಮಾತ್ರದಲ್ಲಿ ಓದುಗರಿಗೆ ಪುಸ್ತಕವು ದೊರಕುವುದು. ಈ ಗ್ರಂಥಾಲಯದಲ್ಲಿ ಪುಸ್ತಕವು ಕೇವಲ ವಿದ್ಯಾರ್ಥಿಗಳ ಅರಿವಿನ ವಿಸ್ತಾರಕ್ಕೆ ಮಾತ್ರವಲ್ಲ, ಸಾರ್ವಜನಿಕರ ಜ್ಞಾನ ದಾಹ ನೀಗಿಸಲು ಸಾರ್ವಜನಿಕ ಗ್ರಂಥಾಲಯದಂತೆ ಕೆಲಸ ನಿರ್ವಹಿಸುತ್ತಿದೆ. ಇದು ವಿದ್ಯಾರ್ಥಿ ಸ್ನೇಹಿ ಗ್ರಂಥಾಲಯವಾಗಿದ್ದು, ವಿದ್ಯಾರ್ಥಿಗಳೇ ಗ್ರಂಥಪಾಲಕರು.

ಅಟಲ್ ಟಿಂಕರಿಂಗ್ ಲ್ಯಾಬ್
ಕೇಂದ್ರ ಸರಕಾರದ ಅನುದಾನದಿಂದ ನಡೆಯುವ ಅಟಲ್ ಟಿಂಕರಿಂಗ್ ಲ್ಯಾಬ್ 2019ರಲ್ಲಿ ಈ ಸಂಸ್ಥೆಯಲ್ಲಿ ಸ್ಥಾಪನೆಗೊಂಡಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ಸಂಶೋಧಕರರನ್ನು ದೇಶಕ್ಕೆ ಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸುಮಾರು 20 ಲಕ್ಷ ರೂಪಾಯಿ ಅನುದಾನದಿಂದ ರೂಪ ತಳೆದ ಅಟಲ್ ಟಿಂಕರಿಂಗ್ ಲ್ಯಾಬ್ ವಿದ್ಯಾರ್ಥಿಗಳ ಪ್ರಯೋಗಶೀಲತೆಗೆ, ಸಂಶೋಧನಾಮನೋಭಾವಕ್ಕೆ , ಸೃಜನಶೀಲತೆಗೆ ಪ್ರೇರಣೆಯನ್ನು ನೀಡುತ್ತಿದೆ. 2019-20 ನೆಯ ವರ್ಷದಲ್ಲಿ ಈ ಲ್ಯಾಬ್ ಭಾರತ ಸರಕಾರದ ನೀತಿ ಆಯೋಗದಿಂದ “ಅಟಲ್ ಟಿಂಕರಿಂಗ್ ಲ್ಯಾಭ್ ಆಫ್ ದಿ ಇಯರ್” ಎಂಬ ಪ್ರಶಸ್ತಿ ಗಳಿಸಿಕೊಂಡಿದೆ. ಇಲ್ಲಿ ತರಭೇತಿ ಪಡೆದ ವಿದ್ಯಾರ್ಥಿಗಳು ಭವಿಷ್ಯದ ವಿಜ್ಞಾನಿಗಳಾಗಿ ತಂತ್ರಜ್ಞರಾಗಿ ಹೊರಹೊಮ್ಮುತ್ತಾರೆ. ಪ್ರತಿವಾರ ಇಂಜೀನಿಯರ್ ಪದವಿ ಪಡೆದ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ

Latest Posts

ಕಲಾಂತರ್ಗತ ತರಭೇತಿ

March 15, 2024

ಶಾಲೆಯಿಂದ ಆಚೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಜ್ಞಾನವನ್ನುವ ಕಟ್ಟುವುದು. ಸ್ಥಳೀಯ ಶಾಸನವನ್ನು ಮತ್ತು ಪ್ರಾಚೀನ ಅವಶೇಷಗಳ ಮೂಲಕ…

ಕ್ಯಾನ್ ಪಿನ್ ಸಂಸ್ಥೆಯ DGM ಭೇಟಿ

March 13, 2024

ಕ್ಯಾನ್ ಪಿನ್ ಸಂಸ್ಥೆಯ DGM ಪ್ರಶಾಂತ ಜೋಶಿ ಸರ್ ಸಂಸ್ಥೆಗೆ ಭೇಟಿಕೊಟ್ಟು ಶೈಕ್ಷಣಿಕ ಚಟುವಟಿಕೆ ಮತ್ತು ಭೌತಿಕ…

X