ದಿನಾಂಕ 9/10/2023 ನೆಯ ಸೋಮವಾರ ಕರ್ನಾಟಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಚಿಣ್ಣರ ವನ್ಯದರ್ಶನ ಕಾರ್ಯಕ್ರಮ ಜರುಗಿತು.ನಮ್ಮ ಸಂಸ್ಥೆಯ 50 ವಿದ್ಯಾರ್ಥಿಗಳ ತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.ಮೊದಲಿಗೆ ಕೊಲ್ಲೂರಿನ ಆನೆಜರಿ ಅಭಯಾರಣ್ಯಕ್ಕೆ ಭೇಟಿ ನೀಡಿದ ಪ್ರವಾಸಿತಂಡಕ್ಕೆ ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀ ಸಂಪತ್ ಶಾಸ್ತ್ರೀ ಮತ್ತು ಶ್ರೀ ಸುನೀಲ್ ಡಿ ಕುಂಬಾರ್ ವನ್ಯಜೀವಿಗಳ ಬಗ್ಗೆ ಮಾಹಿತಿ ನೀಡಿದರು.ಅನಂತರ ಕೇಂದ್ರೀಯ ನಾಟ ಸಂಗ್ರಹಾಲಯ ವಂಡ್ಸೆಗೆ ಭೇಟಿ ನೀಡಿದ ತಂಡಕ್ಕೆ ಶ್ರೀಮತಿ ಗೀತಾ ಯಾಸಣ್ಣನವರು ಮಾಹಿತಿ ನೀಡಿದರು.ಅನಂತರ ನೇರಳಕಟ್ಟೆ ಮಾವಿನಕುಳಿ ಸಸ್ಯಕ್ಷೇತ್ರಕ್ಕೆ ಭೇಟಿ ನೀಡಿದ ಚಿಣ್ಣರತಂಡಕ್ಕೆ ಉಪವಲಯ ಅರಣ್ಯಾಧಿಕಾರಿ ಶ್ರೀ ಶರತ್ ಗಾಣಿಗ ಮಾಹಿತಿ ನೀಡಿದರು.ಅನಂತರ ಕುಂದಾಪುರದ ವಲಯ ಅರಣ್ಯ ಕಚೇರಿಗೆ ಭೇಟಿ ನೀಡಿ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಕಿರಣ್ ಬಾಬು ಇವರು ವಿದ್ಯಾರ್ಥಿ ತಂಡಕ್ಕೆ ಮಾಹಿತಿ ನೀಡಿದರು.ಅನಂತರ ಕುಂದಾಪುರ ಕೋಡಿಯ ಕಾಂಡ್ಲ್ ನೆಡುತೋಪಿಗೆ ಭೇಟಿ ನೀಡಿ ಅಲ್ಲಿ ಬೋಟಿಂಗ್ ಅನುಭವ ಪಡೆದುಕೊಳ್ಳಲಾಯಿತು.ಶ್ರೀ ಉದಯ ಬಿ ಉಪವಲಯ ಅರಣ್ಯಾಧಿಕಾರಿಗಳು ಕಾಂಡ್ಲ್ ದ ಬಗ್ಗೆ ಮಾಹಿತಿ ನೀಡಿದರು.ಈ ಚಿಣ್ಣರ ವನ್ಯ ದರ್ಶನ ಕಾರ್ಯಕ್ರಮವನ್ನು ಆಲೂರು ಉಪವಲಯ ಅರಣ್ಯಾಧಿಕಾರಿಗಾದ ಶ್ರೀ ದಿಲೀಪ್ ಕುಮಾರ ಆಯೋಜನೆ ಮಾಡಿದ್ದರು.
- 09 Oct
- 2023